ಕವಿಜೋಡಿಯ ಆತ್ಮಗೀತ



Book 2

Publisher: ಪಲ್ಲವ ಪ್ರಕಾಶನ

Description:

ಇಂಗ್ಲೆಂಡಿನ ತರುಣ ಕವಿ ಟೆಡ್ ಹ್ಯೂಸ್‌ಗೆ ಒಂದು ಸಂಜೆ ಅಮೆರಿಕದ ಉದಯೋನ್ಮುಖ ಕವಯಿತ್ರಿ ಸಿಲ್ವಿಯಾ ಪ್ಲಾತ್ ಸಿಕ್ಕಳು. ಸಿಲ್ವಿಯಾ-ಟೆಡ್ ಮದುವೆಯಾದರು. ಪ್ರತಿಭಾಶಾಲಿ ಕವಿಗಳಾಗಿ ಅರಳತೊಡಗಿದರು. ಕಾವ್ಯವೇ ಬದುಕೆಂಬಂತೆ ಕಂಡಿದ್ದ ಅವರು ಕವಿತೆ, ಕತೆ, ನಾಟಕ, ವಿಮರ್ಶೆ ಬರೆದರು. ಬರಬರುತ್ತಾ ಅವರ ಬದುಕಿನಲ್ಲಿ ಏರುಪೇರುಗಳಾದವು. ಟೆಡ್ ಹ್ಯೂಸ್‌ನಿಂದ ಬೇರೆಯಾದ ಸಿಲ್ವಿಯಾ ಒಂದು ರಾತ್ರಿ ತನ್ನೆರಡು ಪುಟ್ಟ ಮಕ್ಕಳನ್ನು ಬಿಟ್ಟು ತನ್ನ ಬದುಕನ್ನು ಕೊನೆಗಾಣಿಸಿಕೊಂಡಳು...

ಟೆಡ್ -ಸಿಲ್ವಿಯಾ ಕವಿಜೋಡಿಯ ಬದುಕು, ಅವರ ನೂರಾರು ಕವಿತೆಗಳು, ಬರಹಗಳು; ಕವಿತೆ ಬರೆಯಲು ಅವರ ಸಿದ್ಧತೆ, ಶ್ರಮ, ಕಾತರ, ಚಡಪಡಿಕೆ, ಹತಾಶೆ, ಸಂಭ್ರಮಗಳು ಕವಿಜೋಡಿಯ ಆತ್ಮಗೀತದ ತುಂಬ ಹಬ್ಬಿವೆ. ಟೆಡ್-ಸಿಲ್ವಿಯಾ ಕವಿಲೋಕದ ಸಂಗದಲ್ಲಿ ಅರಳಿ, ಕಾವ್ಯದ ನಾಜೂಕು ಬಳ್ಳಿಯನ್ನು ಆಶ್ರಯಿಸಿ ಮೈದಾಳಿದ ಕಥಾಕಾವ್ಯ ಇದು.

 

Deeply appealing work..carries the reader to a different world..It has left a Renaissnace- tragedy like effect on me -Dr. Veena Shanteshwar

 

ಯಾವ ಸಂವೇದನೆಗಾಗಿ ಸ್ತ್ರೀವಾದಿಗಳು ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೋ, ಬಯಸುತ್ತಿದ್ದಾರೋ ಅದು ನಟರಾಜ್ ಗೆ ಸಿಕ್ಕಿದೆ ಎನ್ನುವುದಕ್ಕೆ ಕಥಾಕಾವ್ಯದುದ್ದಕ್ಕೂ ಪುರಾವೆಗಳಿವೆ. ಈ ಕೃತಿಗೆ ನಮ್ಮ ಕಾಲದ ಅತ್ಯುತ್ತಮ ಪಠ್ಯ ಎನ್ನುವ ಹೆಗ್ಗಳಿಕೆ ಸಿಕ್ಕೇ ಸಿಗುತ್ತದೆ. -ಡಾ.ಎಂಎಸ್. ಆಶಾದೇವಿ

 

ಕನ್ನಡದ ಮಟ್ಟಿಗೆ ಇದೊಂದು ಅಪರೂಪದ ಕೃತಿ. -ಬಿ. ಆರ್. ಲಕ್ಷ್ಮಣರಾವ್

 

‘ಕವಿಜೋಡಿಯ ಆತ್ಮಗೀತ’ ಒಂದು ಅದ್ಭುತ ಕೃತಿ . -ಜ್ಯೋತಿ ಗುರುಪ್ರಸಾದ್

 

ಮುಗಿಯದ ಪರಸ್ಪರರ ಪ್ರೇಮ, ದಾಂಪತ್ಯದೊಳಗಿನ ಹೇಳಿಕೊಳ್ಳಲಾಗದ ಆಕ್ರಮಣಕಾರಿ ಹಲ್ಲೆಗಳು, ಕಾವ್ಯ ಸಂಗಾತ, ವಿಭಿನ್ನ ಕಾವ್ಯ ಲೋಕಗಳು---ಹೀಗೆ ಕವಿಜೋಡಿಯ ಆತ್ಮಗೀತ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ…ಓದುಗರೆದೆಯಲ್ಲಿ ವಿಷಾದ, ಮೆಚ್ಚುಗೆ, ತಪ್ಪಿತಸ್ಥ ಭಾವಗಳು ಮೂಡುತ್ತಾ ಹೋಗುತ್ತವೆ. -ಡಾ.ಎಚ್.ಎಲ್. ಪುಷ್ಪ

 

ಕಥನ ಕಾವ್ಯದ ಆರಂಭಕ್ಕೆ ನಮ್ಮ ಮೈಮನಸ್ಸನ್ನೆಲ್ಲ ಯುವ ಜೋಡಿಯ ತಾಜಾ ಪ್ರಣಯವೇ ಆವರಿಸಿ ಮನಸ್ಸಿಗೆ ತಂಪೆರೆಯುತ್ತ ಸಾಗುತ್ತದೆ. ಅಂತ್ಯ ಸಮೀಪಿಸಿದಂತೆಲ್ಲ ಅಷ್ಟೇ ವಿಷಾದ ಆವರಿಸಿ ಮನಸ್ಸು ಮಡುಗಟ್ಟುವಂತೆ ಮಾಡುತ್ತದೆ…. ಗ್ರೀಕ್‌ ದುರಂತ ನಾಟಕಗಳ ಛಾಯೆ ಸುಳಿದು ಹೋಗುತ್ತದೆ. - ಗುರುಪ್ರಸಾದ್ ಕಂಟಲಗೆರೆ


BUY THIS BOOK