ಕಾಮನ ಹುಣ್ಣಿಮೆ



Book 2

Publisher: ಪಲ್ಲವ ಪ್ರಕಾಶನ

Description:

‘ಕಾಲ ಬರುತ್ತೆ ಬರುತ್ತೆ ಅಂತ ಹಳೇ ಕಾಲದೋರ ಥರ ಸುಮ್ನೆ ಕಾಯ್ತಾ ಕೂತಿರಬಾರದು. ಒಂದು ಸರಿಯಾದ ಕೆಲಸ ಮಾಡಬೇಕಾದರೆ ಅದಕ್ಕೆ ತಕ್ಕ ಕಾಲಾನ ನಾವೇ ಕ್ರಿಯೇಟ್ ಮಾಡ್ಕೋಬೇಕು!
ಇದು ‘ಕಾಮನ ಹುಣ್ಣಿಮೆ’ ಕಾದಂಬರಿಯ ಕೊನೆಯ ಮಾತು.

 

ಹೆಣ್ಣು, ಗಂಡುಗಳ ಸಾಧ್ಯತೆ, ಘನತೆಗಳನ್ನು ಮಂಡಿಸುವ ಈ ಕಾದಂಬರಿಯ   ಪಾತ್ರಗಳಲ್ಲಿ ದುಃಖ, ತಾಳಿಕೆ, ಕುಟುಂಬದ ಮೌಲ್ಯಗಳು, ಸ್ವಾವಲಂಬನೆಯ ತುಡಿತ, ಜೀವಚೈತನ್ಯ... ಎಲ್ಲವೂ ಸೇರಿಕೊಂಡಿವೆ. ಮಿಲಿಟರಿ ಸೇರಿ ಊರಿಗೆ ಮರಳದ ಗಂಡನನ್ನು ಕುರಿತ ದುಃಖವನ್ನು ಅದುಮಿಟ್ಟು, ಮಗ ಚಂದ್ರನನ್ನು ಓದಿಸುವ ಶಾಂತಕ್ಕನ ಛಲ, ಸೈರಣೆ; ಚಂದ್ರ ಬೊಂಬೆ ಕಲೆ ಕಲಿತು ಸ್ವತಂತ್ರನಾಗುವ ರೀತಿ- ಎರಡೂ ವಿಶಿಷ್ಟವಾಗಿವೆ. ಪ್ರೀತಿ, ವಿಧವಾ ವಿವಾಹ, ಮರು ವಿವಾಹ, ಅಂತರ್ಜಾತೀಯ ವಿವಾಹ...ಎಲ್ಲವೂ ಘಟಿಸುವ ಕಾದಂಬರಿಯ ಕೊನೆ ಕನ್ನಡ ಕಾದಂಬರಿ ಪರಂಪರೆಯಲ್ಲೇ ಅಪೂರ್ವವಾಗಿದೆ. ಆತ್ಮೀಯ ನಿರೂಪಣೆಯ ‘ಕಾಮನ ಹುಣ್ಣಿಮೆ’ ಮುಕ್ತ ಮನಸ್ಸಿನ ಹೊಸ ತಲೆಮಾರಿಗೆ ಪ್ರಣಾಳಿಕೆಯಂತಿದೆ.  

 

‘ನವ್ಯ ಹಾಗೂ ದಲಿತ ಸಾಹಿತ್ಯಗಳ ಕಾಲಘಟ್ಟದ ನಂತರದ ಆರ್ದ್ರ ಕಥನ- ಕಾಮನ ಹುಣ್ಣಿಮೆ.’- ಮೊಗಳ್ಳಿ ಗಣೇಶ್

ಸಾಂದ್ರವಾದ, ಉತ್ಕಟವಾದ, ಆದರೂ ಸಂಯಮದ ನಿಶ್ಶಬ್ದ ಆಸ್ಫೋಟದಂಥ ಕಾದಂಬರಿ.   - ಎಂ.ಎಸ್. ಆಶಾದೇವಿ

ಪ್ರಬುದ್ಧ ಹಾಗೂ ಮಾಗಿದ ಬರವಣಿಗೆ. ಗ್ರಾಮೀಣ ಪರಿಸರದ ಚಿತ್ರಣವೂ ಅದ್ಭುತ. -ಚಂದ್ರಶೇಖರ ತಾಳ್ಯ


BUY THIS BOOK