ಎಲ್ಲರ ಗಾಂಧೀಜಿ



Book 2

Publisher: Pallava Prakashana

Description:

ಮೂರು ತಿಂಗಳಲ್ಲಿ ಮೂರು ಮುದ್ರಣ ಕಂಡ ಅಪರೂಪದ ಗಾಂಧೀ ಸಂಕಲನ ಇದು-ಪ್ರಕಾಶಕರು

ನಟರಾಜ್ ಹುಳಿಯಾರ್ ಸಂಪಾದಿಸಿರುವ ‘ಎಲ್ಲರ ಗಾಂಧೀಜಿ’ ಇದುವರೆಗೆ ಕನ್ನಡದಲ್ಲಿ ಬಂದಿರುವ   ಇತರೆಲ್ಲ ಗಾಂಧೀ ಚಿಂತನೆಗಳ ಕೃತಿಗಳಿಗಿಂತ ಭಿನ್ನವಾಗಿದೆ. ಗಾಂಧೀಜಿಯನ್ನು ಅವರದೇ ಬರವಣಿಗೆಗಳ ಹಲವು ಭಿನ್ನ ಕೋನಗಳಿಂದ ಮಂಡಿಸುವ ವಿಶಿಷ್ಟ ಪ್ರಯತ್ನವಾಗಿದೆ. ಈ ಕೃತಿ ಬಿಡುಗಡೆಯಾದ ಕ್ಷಿಪ್ರ ಅವಧಿಯಲ್ಲಿಯೇ ಓದುಗ ವಲಯದಲ್ಲಿ ಉತ್ತಮ ಪ್ರತಿಕ್ರಿಯೆಯನ್ನು ಪಡೆದು, ಮರು ಮುದ್ರಣಗಳಾಗಿ ವ್ಯಾಪಕ ಚರ್ಚೆಗೂ ಒಳಗಾಗಿದೆ.  

ಈ ಪುಸ್ತಕದ 400 ಪುಟಗಳಲ್ಲಿ 11 ವಿಭಾಗಗಳ 124 ಅಧ್ಯಾಯಗಳಿವೆ. ಇಲ್ಲಿ ಮಹಾತ್ಮಾ ಗಾಂಧೀಜಿಯವರ ಮಾತು-ಬರಹ-ಚಿಂತನೆಗಳು ಸರಳ ಕನ್ನಡದಲ್ಲಿವೆ. ಗಾಂಧೀಜಿಯವರ ಜೀವನ, ಚಿಂತನೆ, ಒಳನೋಟ, ಅವರ ಹೋರಾಟಗಳು, ಭಾಷಣಗಳು, ಪತ್ರಗಳು, ಪ್ರತಿಕ್ರಿಯೆಗಳು, ಮಾತುಕತೆಗಳು, ಸಂವಾದಗಳು ಹೀಗೆ ವೈವಿಧ್ಯಮಯ ವಿಷಯಗಳ ಬಗೆಗಿನ ಗಾಂಧೀ ಬರಹಗಳಿವೆ. ಕೊನೆಯಲ್ಲಿ ಗಾಂಧೀಜಿಯವರ ಪ್ರಸಿದ್ಧವಾದ ನೂರಾರು ಹೇಳಿಕೆಗಳಿವೆ. ವಿದ್ಯಾರ್ಥಿಗಳು, ಶಿಕ್ಷಕರು, ರಾಜಕಾರಣಿಗಳು, ಅಧಿಕಾರಿಗಳು, ಹೋರಾಟಗಾರರು, ಭಾಷಣಕಾರರು, ನೌಕರರು ಹಾಗೂ ಜನಸಾಮಾನ್ಯರೆಲ್ಲರಿಗೂ ಇದೊಂದು ಉಪಯುಕ್ತ ಹಾಗೂ ಸಂಗ್ರಹಯೋಗ್ಯ ಕೃತಿಯಾಗಿದೆ; ಮಕ್ಕಳಿಂದ ಹಿಡಿದು ಹಿರಿಯರವರೆಗೂ ಮನೆಮಂದಿಯೆಲ್ಲಾ ಆರಾಮಾಗಿ ಓದಬಲ್ಲ ಪುಸ್ತಕವಾಗಿದೆ. ಸರಳ ಗದ್ಯದ ಮೂಲಕ ಎಲ್ಲರನ್ನೂ ತಲುಪುವ ಗಾಂಧೀ ಬರಹಗಳು ಕನ್ನಡಾನುವಾದಗಳಲ್ಲೂ ಹಾಗೇ ತಲುಪುತ್ತವೆ. ಇದು ಕೇವಲ 300 ರೂಪಾಯಿಯಲ್ಲಿ ಎಲ್ಲರ ಕೈಗೆಟಕುವ, ಎಲ್ಲ ಕನ್ನಡಿಗರ ಕೃತಿಯಾಗಿದೆ. ಗಾಂಧೀ ಚಿಂತನೆಗಳ ಇಂತಹ ಅಪೂರ್ವ ಕೃತಿ ಒದಗಿಸಿದ ನಟರಾಜ್ ಹುಳಿಯಾರ್ ಕನ್ನಡಿಗರ ಅಭಿನಂದನೆಗೆ ಪಾತ್ರರಾಗಿದ್ದಾರೆ.

                                                                                                           -ಮೋಹನ್ ಕುಮಾರ್ ಮಿರ್ಲೆ


BUY THIS BOOK