ವಾಸ್ತವ ಹಾಗೂ ಕನಸಿನ ಮಧ್ಯೆ ನಡೆಯುವ ‘ಶೇಕ್ ಸ್ಪಿಯರ್ ಮನೆಗೆ ಬಂದ’ ಎಂಬ ಅಪರೂಪದ ನಾಟಕ ಕನ್ನಡ ಸಂವೇದನೆ ಸೂಕ್ಷ್ಮವಾದದ್ದರ ಸೂಚನೆಯಾಗಿದೆ.
-ನಟರಾಜ ಹೊನ್ನವಳ್ಳಿ
‘ಶೇಕ್ ಸ್ಪಿಯರ್ ಮನೆಗೆ ಬಂದ’ ಶೇಕ್ ಸ್ಪಿಯರ್ ನಾಟಕಗಳು ಹಾಗೂ ಅವನ ಜೀವನ ಕುರಿತ ಅಪಾರ ಲವಲವಿಕೆಯ ಆಧುನಿಕೋತ್ತರ ನಾಟಕ.
-ಕೆ. ಎಸ್. ವೈಶಾಲಿ
ವಚನಕಾರರ ಚಾರಿತ್ರಿಕತೆ ಮಿಥಿಕತೆಗಳಿಗಿಂತ ಹೆಚ್ಚಾಗಿ ಅವರ ರಾಜಕೀಯ, ಸಾಮಾಜಿಕ ಹೋರಾಟಗಳ ನಿರಂತರತೆ ಮತ್ತು ಪ್ರಸ್ತುತತೆಗಳನ್ನು ಬಿಂಬಿಸುವುದರ ಮೂಲಕ ‘ಮುಂದಣ ಕಥನ’ ನಾಟಕಕ್ಕೆ ವಚನಗಳ ಮರುಕಥನಗಳ ಸಂದರ್ಭದಲ್ಲಿ ವಿಶಿಷ್ಟ ಸ್ಥಾನ ದೊರಕಿದೆ.
-ಎಚ್.ಎಸ್. ಶಿವಪ್ರಕಾಶ್
ವಚನ ಚಳುವಳಿಯನ್ನು ಇಷ್ಟು ಸಮಗ್ರವಾಗಿ ಈ ಹಿಂದಿನ ನಾಟಕಕಾರರಿಗೆ ಗ್ರಹಿಸಲು ಸಾಧ್ಯವಾಗಿರಲಿಲ್ಲ ಎನ್ನುವುದೇ ‘ಮುಂದಣ ಕಥನ’ದ ಗಹನತೆಯನ್ನು ಸೂಚಿಸುತ್ತದೆ.
-ರಾಜಪ್ಪ ದಳವಾಯಿ
ಎಷ್ಟೋ ದಿನಗಳ ಮೇಲೆ ಜೀವ ಕಲಕಿಬಿಡುವಂಥ ಕೃತಿ ಓದಿದೆ…ನಾಟಕದ ಕೊನೆಯಲ್ಲಿ ದಿಕ್ಕೇಡಿ ಸ್ಥಿತಿಯಲ್ಲಿ ದಿಕ್ಕು ಸೂಚಿಸುವ ಆಶಾವಾದಿ ಕಾರಣಿಕ ಸದ್ಯದ ಭಯಗ್ರಸ್ತ ಸಾಂಸ್ಕೃತಿಕ ಮನಸ್ಸಿಗೆ ನೈತಿಕ ಧೈರ್ಯ ತುಂಬುತ್ತದೆ.
–ಎಂ.ಡಿ. ವಕ್ಕುಂದ