ಮತ್ತೊಬ್ಬ ಸರ್ವಾಧಿಕಾರಿ



Book 2

Publisher: Pallava Prakashana

Description:

ನಾನು ಬಲ್ಲ ಕೆಲವೇ ಯುವ ಬರಹಗಾರರಲ್ಲಿ ನಟರಾಜ್ ವಿಶಿಷ್ಟ ಶೈಲಿ ಪಡೆದವರು; ಕಾಣುವ ಧೈರ್ಯದ ಜೊತೆಗೆ ಕಂಡದ್ದರ ಬಗ್ಗೆ ಅನುಮಾನ ಇಟ್ಟುಕೊಂಡವರು.

                 -ಪಿ. ಲಂಕೇಶ್

‘…the Simple narration of Maaya Kinnari is intimate and involving.’        -Adoor Gopalakrishnan

‘ಮತ್ತೊಬ್ಬಸರ್ವಾಧಿಕಾರಿ’ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ನಟರಾಜ್ ಹುಳಿಯಾರ್ ಅವರ ಮೊದಲ ಕಥಾ ಸಂಕಲನ. ಈ ಸಂಕಲನದ ಕತೆಗಳು: ನೆತ್ತರು ಮತ್ತು ಗುಲಾಬಿ. ಹುತ್ತುಗಟ್ಟದೆ ಚಿತ್ತ. ಮಾಯಾಕಿನ್ನರಿ. ಕಾಮ್ರೇಡ್ ಕೃಷ್ಣಸ್ವಾಮಿ ಬರೆದ ರಿಯಾಕ್ಷನರಿ ಕತೆ. ದಾರಿಯೆರಡರ ನಡುವೆ ದಟ್ಟ ಮಂಜು. ಬಿರುಬಿಟ್ಟ ನೆಲ. ಎಲ್ಲೋ ಜೋಗಪ್ಪ ನಿನ್ನರಮಽಽನೆ. ನಾನೆಂಬುದೇನಿಲ್ಲ. ಸತ್ತ ಬದುಕಿನ ಸುತ್ತ.

ಶಿವರಾಮ ಕಾರಂತ ಪ್ರತಿಷ್ಠಾನ ಪ್ರಶಸ್ತಿಯನ್ನೂ ಪಡೆದ ಈ ಸಂಕಲನದಲ್ಲಿರುವ ‘ನೆತ್ತರು ಮತ್ತು ಗುಲಾಬಿ’ ಪ್ರಜಾವಾಣಿ ದೀಪಾವಳಿ ಕಥಾ ಸ್ಪರ್ಧೆ-1986ರ ಪ್ರಥಮ ಬಹುಮಾನ ಪಡೆದಿದೆ. ‘ಮಾಯಾಕಿನ್ನರಿ’ ಕತೆ ದೆಹಲಿಯ ಕಥಾ ಸಂಸ್ಥೆಯಿಂದ 1991ರ ವರ್ಷದ ಶ್ರೇಷ್ಠ ಕತೆಯೆಂದೂ, ನಂತರ 1991-2000 ನಡುವಣ ಕನ್ನಡದ ಶ್ರೇಷ್ಠ ಕತೆಯೆಂದೂ ಸಮ್ಮಾನ ಪಡೆಯಿತು.  ‘ಕಥಾ’ದ ತೀರ್ಪುಗಾರರಾಗಿದ್ದ ಖ್ಯಾತ ಸಿನಿಮಾ ನಿರ್ದೇಶಕ ಅಡೂರು ಗೋಪಾಲಕೃಷ್ಣನ್ 1990ರ ದಶಕದ ಹತ್ತು ಮುಖ್ಯ ಕನ್ನಡ ಕತೆಗಳ ನಡುವೆ ‘ಮಾಯಾಕಿನ್ನರಿ’ ಕತೆಯನ್ನು ಅತ್ಯುತ್ತಮ ಎಂದು ಆಯ್ಕೆ ಮಾಡಿದ್ದರು. 


BUY THIS BOOK