ಡಿ. ಆರ್. ನಾಗರಾಜ್



Book 2

Publisher: Sahitya Academy

Description:

ಭಾರತದ ಮಹತ್ವದ ಸಂಸ್ಕೃತಿ ಚಿಂತಕ-ವಿಮರ್ಶಕರಾದ ಡಾ. ಡಿ.ಆರ್. ನಾಗರಾಜ್ ಅವರ ಜೀವನ ಹಾಗೂ ಕೃತಿಗಳಿಗೆ ಸಮರ್ಥ ಪ್ರವೇಶ ಒದಗಿಸಿಕೊಡುವ ಈ ಪುಸ್ತಕ ಸಾಹಿತ್ಯ ಅಕಾಡೆಮಿಯ ‘ಭಾರತೀಯ ಸಾಹಿತ್ಯ ನಿರ್ಮಾಪಕರು’ ಎಂಬ ಮಹತ್ವದ ಮಾಲಿಕೆಯಲ್ಲಿ ಪ್ರಕಟವಾಗಿದೆ. ಸಾಹಿತ್ಯ ವಿಮರ್ಶೆ, ಸಂಶೋಧನೆ, ಸಂಸ್ಕೃತಿ ವಿಮರ್ಶೆ, ಸಾಮಾಜಿಕ ಸಿದ್ಧಾಂತಗಳು, ಚಳುವಳಿಗಳು, ಥಿಯರಿ ಮುಂತಾದ ಹಲವು ವಲಯಗಳಲ್ಲಿ ಆಳವಾಗಿ ತೊಡಗಿದ್ದ ಡಿ. ಆರ್. ನಾಗರಾಜ್ ಕನ್ನಡದಲ್ಲಿ ಅನನ್ಯ ಚಿಂತನಾ ಮಾರ್ಗಗಳನ್ನು ರೂಪಿಸಿದವರು. ಇಂಗ್ಲಿಷ್‌ ಭಾಷೆಯಲ್ಲೂ ಬರೆಯುತ್ತಿದ್ದ ಡಿ. ಆರ್. ನಾಗರಾಜರ ಕೃತಿಗಳು ಸಾಹಿತ್ಯ ವಿಮರ್ಶೆ, ಸಂಸ್ಕೃತಿ ಚಿಂತನೆ ಹಾಗೂ ಸಂಶೋಧನಾ ವಲಯಗಳಲ್ಲಿ ಮಹತ್ವದ ಸ್ಥಾನ ಪಡೆದಿವೆ. ಮಾರ್ಕ್ಸ್ ವಾದ, ಗಾಂಧೀವಾದ, ಲೋಹಿಯಾವಾದ, ಅಂಬೇಡ್ಕರ್‌ವಾದಗಳ ಗಂಭೀರ ಅನುಸಂಧಾನದಿಂದ ರೂಪುಗೊಂಡಿದ್ದ ಡಿ.ಆರ್. ನಾಗರಾಜರ ಚಿಂತನೆ ಎಲ್ಲ ಕಾಲಕ್ಕೂ ಪ್ರಬುದ್ಧ ಸಂಸ್ಕೃತಿ ನಿರ್ಮಾಣದ ಸಖನಂತಿದೆ. ವಿಮರ್ಶೆಗೆ ಸೃಜನಶೀಲತೆ, ಕಥನ, ಬಹುಜ್ಞಾನ ಶಿಸ್ತುಗಳನ್ನು ಬೆಸೆದ ಡಿ.ಆರ್. ನಾಗರಾಜ್ ಅವೈದಿಕ ಚಿಂತನೆ, ಹಾಗೂ ನಿರ್ವಸಾಹತೀಕರಣ ಚಿಂತನೆಗಳ ಹೊಸ ಮಾರ್ಗಗಳನ್ನು ಸೃಷ್ಟಿಸಿದವರು. ಡಿ. ಆರ್. ನಾಗರಾಜರ ಬದುಕು -ಬರಹಗಳನ್ನು ಕುರಿತ ಆಳವಾದ ಅಧ್ಯಯನ ಹಾಗೂ ಪ್ರೀತಿಯಿಂದ ರೂಪುಗೊಂಡ ಪುಸ್ತಕ ಇದು.


BUY THIS BOOK