ಬಸವಲಿಂಗಪ್ಪನವರು ಮತ್ತು ಡೇವಿಡ್ ಸಾಹೇಬರು



Book 2

Publisher: Pallava Prakashana

Description:

ಇವು ಲೋಕದೃಷ್ಟಿಯ ಕಲಾತ್ಮಕ ಕತೆಗಳು

  -ಕೃಷ್ಣಮೂರ್ತಿ ಹನೂರು

ನನ್ನನ್ನು ಈಚೆಗೆ ಕಾಡಿದ ಕತೆಗಳು ನಟರಾಜ್ ಹುಳಿಯಾರ್ ಬರೆದ ಕತೆಗಳು…ಅನುಮಾನ, ಜೀವನ ಪ್ರೇಮ, ಕೊಂಕು ಯಾವುದನ್ನೂ ಬಚ್ಚಿಡದಂತೆ ಬರೆಯಬಲ್ಲ ನಟರಾಜ್ ಹುಳಿಯಾರ್ ನನ್ನ ಮೆಚ್ಚಿನ ಕತೆಗಾರ. ನನಗೆ ಅಗತ್ಯವಾಗಿ ಉಳಿದ ದನಿ.

-ಯು.ಆರ್. ಅನಂತಮೂರ್ತಿ

ವರ್ತಮಾನದ ಸಮಾಜದ ಇತಿಹಾಸವನ್ನು ರೂಪಿಸುವಾಗ ರಾಜಕೀಯದೊಂದಿಗೆ ಖಾಸಗಿ ಭಾವ ಲೋಕ ಕೂಡ ನಟರಾಜ್ ಹುಳಿಯಾರ್ ಕತೆಗಳನ್ನು ಆವರಿಸಿದೆ.

     -ಕೇಶವ ಮಳಗಿ

‘ಬಸವಲಿಂಗಪ್ಪನವರು ಮತ್ತು ಡೇವಿಡ್ ಸಾಹೇಬರು’ ಕಥೆ ನಾನು ಇದುವರೆಗೂ ಓದಿದ ಅತ್ಯುತ್ತಮ ಕಥೆಗಳಲ್ಲಿ ಒಂದು.  ಕಥೆಯೊಂದು ನಮಗೆ ಗುರುವಾಗಿ, ಆಪ್ತ ಗೆಳೆಯನಾಗಿ ಕಾಣುವ ಖುಷಿಯೇ ಬೇರೆ ಥರದ್ದು.

     -ಅನಿಲ್ ಗುನ್ನಾಪುರ

 

ಕನ್ನಡ ಸಣ್ಣ ಕಥಾ ಬರವಣಿಗೆಯ ಕ್ಷೇತ್ರದ ಅಪೂರ್ವ ಪ್ರಯೋಗಗಳನ್ನುಳ್ಳ ‘ಬಸವಲಿಂಗಪ್ಪನವರು ಹಾಗೂ ಡೇವಿಡ್ ಸಾಹೇಬರು’ ಕಥಾ ಸಂಕಲನ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಬಹುಮಾನ ಪಡೆದಿದೆ. ಈ ಸಂಕಲನ 8 ವಿಶಿಷ್ಟ ಕತೆಗಳನ್ನು ಒಳಗೊಂಡಿದೆ: ಕೋಟೆಮನೆಯ ಪಾಠಗಳು. ಬಸವಲಿಂಗಪ್ಪನವರು ಮತ್ತು ಡೇವಿಡ್ ಸಾಹೇಬರು. ಹೊಸಮನೆ ದೇವರು. ದಾದಾ ಕ ಪಹಾಡ್. ಜ್ಞಾನಪೀಠದ ಹಾದಿಯಲ್ಲಿ. ಫಾಲ್ಸ್ ಸರ್ಟಿಫಿಕೇಟ್. ಆರ್ಟ್ ಆಫ್ ಲೈಯಿಂಗ್. ಸರಸ್ವತಿಯ ಸನ್ನಿಧಿಯಲ್ಲಿ.

ಈ ಸಂಕಲನದ ಹಲವು ಕತೆಗಳು ವಿಶ್ವವಿದ್ಯಾಲಯಗಳ ಪಠ್ಯಗಳಾಗಿವೆ. ‘ಬಸವಲಿಂಗಪ್ಪನವರು ಮತ್ತು ಡೇವಿಡ್ ಸಾಹೇಬರು’ ಕತೆಗಾಗಿ ನಟರಾಜ್ ಹುಳಿಯಾರ್ ‘ಮಯೂರ’ ಮಾಸ ಪತ್ರಿಕೆಯ ‘ವರ್ಷದ ಶ್ರೇಷ್ಠ ಕತೆಗಾರ’ ಪ್ರಶಸ್ತಿ ಪಡೆದರು. 


BUY THIS BOOK