ಬಾರುಕೋಲು



Book 2

Publisher: Pallava Prakashana

Description:

ಖ್ಯಾತ ಸಮಾಜವಾದಿ ಚಿಂತಕ ಹಾಗೂ ಕರ್ನಾಟಕದ ರೈತ ಚಳುವಳಿಯ ರೂವಾರಿ ಪ್ರೊ. ಎಂ.ಡಿ.ನಂಜುಡಸ್ವಾಮಿಯವರ ಬಹು ಮುಖ್ಯ ಭಾಷಣ,ಬರಹ,ಚಿಂತನೆಗಳ ಮಹತ್ವದ ಪುಸ್ತಕ ಇದು. ಸಮಾಜವಾದಿ ಯುವಜನ ಸಭಾ ಕಟ್ಟಿ, ರೈತ ನಾಯಕರಾಗಿ, ಶಾಸಕರಾಗಿ ಎಂಡಿಎನ್ ಮಂಡಿಸಿರುವ ಈ ಚಿಂತನೆಗಳು ರೈತಪರ ಹೋರಾಟ, ಸಮಾನತೆ ಹಾಗೂ ಜಾತ್ಯತೀತ ಚಿಂತನೆಗಳಿಗೆ ತಾತ್ವಿಕ ತಳಹದಿ ನೀಡುತ್ತವೆ.

28 ಬರಹಗಳಿರುವ ಈ ಪುಸ್ತಕದ ಮೊದಲ ಭಾಗದಲ್ಲಿ ಸಮಾಜವಾದಿ `ತಾತ್ವಿಕ ಚಿಂತನೆ\\\'ಯ ಬರಹಗಳಿವೆ. ಭಾಗ-೨ರಲ್ಲಿ ‘ಗ್ರಾಮ ಸಮಾಜ, ರೈತರು ಮತ್ತು ಹೋರಾಟ’ಕುರಿತ ಚಿಂತನೆಗಳಿವೆ. ಭಾಗ-೩ರಲ್ಲಿ ‘ಸಂಸ್ಕೃತಿ ಚಿಂತನೆ’ ಯ ಬರಹಗಳಿವೆ. ಇಲ್ಲಿ ಎಂಡಿಎನ್ ಅವರ ಚಾಟಿಯೇಟಿನಂಥ ಮಾತು, ಡೈರೆಕ್ಟ್ ಆ್ಯಕ್ಷನ್‌ನ ಖದರ್ ಜೊತೆಗೇ ಲೋಹಿಯಾವಾದ, ಗಾಂಧೀವಾದ, ಧರ್ಮ, ಸಂಸ್ಕೃತಿ, ಕುವೆಂಪು ಮಾರ್ಗಗಳ ವಿಶ್ಲೇಷಣೆಗಳೂ ಇವೆ. ಕನ್ನಡನಾಡಿನಲ್ಲಿ ನಡೆಯುತ್ತಾ ಬಂದಿರುವ ಜನತಾ ಹೋರಾಟಗಳ ನಡುವೆ ಮೂಡಿದ ಇಲ್ಲಿನ ಅಪ್ಪಟ ಕನ್ನಡ ಸಮಾಜವಾದಿ ಚಿಂತನೆಗಳು ಎಲ್ಲ ಕಾಲದ ಚಳುವಳಿಗಳ ನಾಯಕರು, ರಾಜಕಾರಣಿಗಳು, ಹೋರಾಟಗಾರರು ಹಾಗೂ ಚಿಂತಕ, ಚಿಂತಕಿಯರಿಗೆ ಹೊಸ ಹಾದಿ ತೋರಬಲ್ಲವು.

                                 ನನ್ನ ರಾಜಕೀಯ ಗುರುಗಳಾದ ಪ್ರೊ. ಎಂ.ಡಿ. ನಂಜುಂಡಸ್ವಾಮಿಯವರ ಬರಹಗಳ ಮಹತ್ವದ ಪುಸ್ತಕ

                 -ಸಿದ್ಧರಾಮಯ್ಯ, ಮಾನ್ಯ ಮುಖ್ಯಮಂತ್ರಿಗಳು, ಕರ್ನಾಟಕ 

 

ಎಂ.ಡಿ. ನಂಜುಂಡಸ್ವಾಮಿ ಅವರ ಚಿಂತನೆಗಳ ಸಂಕಲನ ‘ಬಾರುಕೋಲು’ ಕನ್ನಡದ ಮಣ್ಣಿನಲ್ಲಿ ರೂಪುಗೊಂಡ   ಮೇಧಾವಿಯೊಬ್ಬರ ವೈಚಾರಿಕ ಪ್ರಖರತೆಯ ಮಹತ್ವ ದಾಖಲೆ…ನೈತಿಕ ಪಠ್ಯದ ಅನನ್ಯ ಕೈಪಿಡಿ

- ಚ.ಹ. ರಘುನಾಥ
 


BUY THIS BOOK