ಆಫ್ರಿಕನ್ ಹಾಗೂ ಕನ್ನಡ ಸಾಹಿತ್ಯಗಳಲ್ಲಿ ಆಧುನಿಕತೆ ಮತ್ತು ಪರಂಪರೆ ತೌಲನಿಕ ಅಧ್ಯಯನ



Book 2

Publisher: Pallava Prakashana

Description:

ಈ ಅಧ್ಯಯನ ಕನ್ನಡ ಸಾಹಿತ್ಯ ವಿಮರ್ಶೆಯ ಸಂದರ್ಭದಲ್ಲೇ ಅಪೂರ್ವವಾಗಿದೆ.

                           ಶಾಂತಿನಾಥ ದೇಸಾಯಿ

 

ಕನ್ನಡ ಮತ್ತು ಆಫ್ರಿಕನ್ ಸಾಹಿತ್ಯಗಳ ಇಷ್ಟೊಂದು ವ್ಯಾಪಕ ಅಧ್ಯಯನದ ಮೂಲಕ ಕನ್ನಡ ಸಂಶೋಧನಾ ಕ್ಷೇತ್ರದಲ್ಲಿ ಈ ಕೃತಿ ಹೊಸ ಮಾರ್ಗವನ್ನು ತೆರೆದಿದೆ.

                             ಡಿ. ಆರ್ ನಾಗರಾಜ್

ಕನ್ನಡ ಕಾವ್ಯದ ಅಧ್ಯಯನಕ್ಕೆ ಡಿ.ಆರ್. ನಾಗರಾಜ್ ಅವರ ಅವರ ‘ಶಕ್ತಿ ಶಾರದೆಯ ಮೇಳ’ ಹೇಗೋ ಹಾಗೆಯೇ  ಕನ್ನಡ ಕಾದಂಬರಿಯನ್ನು ಗ್ರಹಿಸಲು ನಟರಾಜ್ ಹುಳಿಯಾರ್ ಬರೆದ ‘ಆಫ್ರಿಕನ್ ಹಾಗೂ ಕನ್ನಡ ಸಾಹಿತ್ಯಗಳಲ್ಲಿ ಆಧುನಿಕತೆ ಮತ್ತು ಪರಂಪರೆ’ ಪುಸ್ತಕ ಕೂಡ ಅಷ್ಟೇ ಮುಖ್ಯ.

      ಎಂ.ಡಿ. ವಕ್ಕುಂದ

 

 

ನಟರಾಜ್ ಹುಳಿಯಾರ್ ಅವರು ಡಾ. ಡಿ.ಆರ್. ನಾಗರಾಜ್ ಅವರ ಮಾರ್ಗದರ್ಶನದಲ್ಲಿ ನಡೆಸಿದ ಪಿಎಚ್.ಡಿ. ಅಧ್ಯಯನದ ಫಲವಾಗಿ ಈ ಪುಸ್ತಕ ರೂಪುಗೊಂಡಿದೆ. ‘ಆಧುನಿಕತೆ ಮತ್ತು ಪರಂಪರೆ’ ಎಂಬ ಪರಿಕಲ್ಪನೆಗಳು ಆಫ್ರಿಕನ್ ಹಾಗೂ ಕನ್ನಡ ಸಾಹಿತ್ಯಗಳಲ್ಲಿ ಪ್ರತಿಫಲಿತವಾಗಿರುವ ಬಗೆಯನ್ನು ವಿವರಣಾತ್ಮಕವಾಗಿ, ಚಾರಿತ್ರಿಕವಾಗಿ ವಿಮರ್ಶಾತ್ಮಕವಾಗಿ ಹಾಗೂ ತಾತ್ವಿಕವಾಗಿ ಈ ತೌಲನಿಕ ಅಧ್ಯಯನದ ಕೃತಿಯಲ್ಲಿ ಶೋಧಿಸಲಾಗಿದೆ.

 

ಈ ಕೃತಿಯ 13 ಅಧ್ಯಾಯಗಳು: ಆಫ್ರಿಕನ್ ಹಾಗೂ ಭಾರತೀಯ ಸಮಾಜಗಳ ವಸಾಹತು ಸನ್ನಿವೇಶ. ವಸಾಹತೀಕರಣ ಹಾಗೂ ನಿರ್ವಸಾಹತೀಕರಣ ಸಿದ್ಧಾಂತಗಳ ಪರಿಶೀಲನೆ. ಆಫ್ರಿಕನ್ ಹಾಗೂ ಕನ್ನಡ ಕಾದಂಬರಿಯ ರೂಪೀಕರಣ. ಆಫ್ರಿಕನ್ ಹಾಗೂ ಕನ್ನಡ ಕಾದಂಬರಿಯ ದೇಶೀ ಪ್ರೇರಣೆಗಳು. ಯುರೋಪ್, ಪಶ್ಚಿಮ ಮತ್ತು ಆಫ್ರಿಕಾ: ಸಂಕಥನಗಳ ಮುಖಾಮುಖಿ. ಅಥೆಂಟಿಕ್ ಆಫ್ರಿಕಾದ ಹುಡುಕಾಟ. ‘ನಿಜ\' ಭಾರತದ ಕಲ್ಪನೆ- ಅಖಿಲ ಭಾರತೀಯ ಮಾದರಿಗಳು; ಕನ್ನಡ ಕಾದಂಬರಿಯ ಮಾದರಿಗಳು. ಆಧುನಿಕತೆ ಮತ್ತು ಪರಂಪರೆಗಳ ಮುಖಾಮುಖಿ. ಪರಂಪರೆ ಮತ್ತು ಹಿಂಸೆ: ದಮನದ ಮಾದರಿಗಳು. ಆಧುನಿಕ ವ್ಯಕ್ತಿ ವಿಶಿಷ್ಟತಾವಾದಿ ಮಾದರಿಗಳು: ಬಂಡುಕೋರ, ಪರದೇಶಿ, ಪರಕೀಯ ಹಾಗೂ ಸಮಾಜವಾದಿ. ವಸಾಹತೋತ್ತರ ಆಫ್ರಿಕಾ ಮತ್ತು ಭಾರತ: ಅವನತಿ, ಭ್ರಮನಿರಸನ, ಕನಸು ಮತ್ತು ನವವ್ಯಕ್ತಿತ್ವ ನಿರ್ಮಾಣ. ಪೌರಾಣಿಕ ಪ್ರತೀಕಗಳು, ಪಾರಂಪರಿಕ ರೂಪಗಳು ಹಾಗೂ ದೇಶಿ ರಂಗಭೂಮಿ. ಈ ಅಧ್ಯಾಯಗಳೊಳಗೆ ಸುಮಾರು 60 ಉಪ ಅಧ್ಯಾಯಗಳೂ ಇವೆ. ಎರಡು ವಿಭಿನ್ನ ಸಮಾಜಗಳ ಸಾಹಿತ್ಯ ಕೃತಿಗಳನ್ನು ಬಹು ಜ್ಞಾನ ಶಿಸ್ತುಗಳ ಮೂಲಕ ಗ್ರಹಿಸುವ ಅನನ್ಯ ಮಾದರಿಯ ಅಧ್ಯಯನ ಇದು. 


BUY THIS BOOK